ಗೋಧಿ ಬಣ್ಣ ಸಾಧಾರಣ ಮೈಕಟ್ಟು, ೨೦೧೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದನ್ನು 'ಹೇಮಂತ್ ರಾವ್' ನಿರ್ದೇಶಿಸಿದ್ದಾರೆ. ಹೇಮಂತ್ ರಾವ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದು. == ಕಥಾಹಂದರ == ಕಾಣೆಯಾಗಿರುವ ತನ್ನ ತಂದೆಯನ್ನು ಹುಡುಕುವ ಮಗನೊಬ್ಬನ ಪಯಣದ ಕತೆ ಇದು. ವೆಂಕೋಬ್ ರಾವ್ (ಅನಂತನಾಗ್). ಈತ ಅಲ್ಜೈಮರ್ (ಮರೆವಿನ ಕಾಯಿಲೆ) ಎಂಬ ಕಾಯಿಲೆಗೆ ತುತ್ತಾಗಿರುತ್ತಾರೆ. ಈತನ ಮಗನೇ ಶಿವ (ರಕ್ಷಿತ್ ಶೆಟ್ಟಿ) ಸಾಫ್ಟ್‌ವೇರ್ ಉದ್ಯೋಗಿ. ಕೆಲಸದ ನಿಮಿತ್ತ ಶಿವ ಬೇರೊಂದು ಊರಿಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಹಾಗಾಗಿ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾನೆ. ಆದರೆ ಅಲ್ಲಿಂದ ವೆಂಕೋಬ್ ರಾವ್ ತಪ್ಪಿಸಿಕೊಳ್ಳುತ್ತಾರೆ. ಶಿವ ಮತ್ತು ವೆಂಕೋಬ್‌ರನ್ನು ನೋಡಿಕೊಳ್ಳುತ್ತಿದ್ದ ಡಾ.ಸಹನಾ (ಶ್ರುತಿ ಹರಿಹರನ್) ಒಟ್ಟಾಗಿ ವೆಂಕೋಬ್‌ರನ್ನು ಹುಡುಕುತ್ತಾರೆ. ಆ ಹುಡುಕಾಟದಲ್ಲಿ ಮಗ ಜೀವನ, ಪ್ರೀತಿ ಮತ್ತು ಸಂತೋಷದ ಬಗ್ಗೆ ಕಲಿಯುತ್ತಾನೆ. == ಪಾತ್ರ ವರ್ಗ == ವೆಂಕೋಬ್ ರಾವ್ ಆಗಿ ಅನಂತನಾಗ್ ಶಿವ ಆಗಿ ರಕ್ಷಿತ್ ಶೆಟ್ಟಿ ಡಾ.ಸಹನಾ ಆಗಿ ಶ್ರುತಿ ಹರಿಹರನ್ ರಂಗ ಆಗಿ ವಸಿಷ್ಠ ಸಿಂಹ ಕುಮಾರ್ ಆಗಿ ಅಚ್ಯುತ್ ಕುಮಾರ್ == ಉಲ್ಲೇಖಗಳು == == ಹೊರಕೊಂಡಿಗಳು == ಸಿನೆಮಾದ ಅಧಿಕೃತ ಜಾಲತಾಣ 2016-06-04 ವೇಬ್ಯಾಕ್ ಮೆಷಿನ್ ನಲ್ಲಿ. ಪುಟ ಅಲೆಮೂಡದ ತೀರದಲ್ಲಿ ಅಳಿಸಿ ಹೋದ ಹೆಜ್ಜೆ ಜಾಡು 2016-06-06 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ, 04, 2016 ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ, ಶರಣ್ ಹುಲ್ಲೂರು, ವಿಜಯಕರ್ನಾಟಕ, 04ಜೂನ್2016 ವ್ಯವಕಲನದ ನೆಪದಲ್ಲಿ ಸಂಕಲನ 2016-06-05 ವೇಬ್ಯಾಕ್ ಮೆಷಿನ್ ನಲ್ಲಿ.–ರಘುನಾಥ ಚ.ಹ., ಪ್ರಜಾವಾಣಿ, 03ಜೂನ್2016 ನೋಡಿದರೆ ಕಳೆದುಹೋಗ್ತೀರಿ…ನೋಡದಿದ್ದರೆ ಕಳೆದುಕೊಳ್ತೀರಿ!- ನವೀನ್ ಸಾಗರ್, ವಿಶ್ವವಾಣಿ, 04ಜೂನ್2016